|
ಆಶಾ ಭೋಸ್ಲೆ ಜೊತೆ ಧ್ವನಿಗೂಡಿಸಲಿರುವ ಉರ್ಮಿಳಾ
ಒಂದು ಕಾಲದ ಮಾದಕ ನಟಿ ಉರ್ಮಿಳಾ ಮಾತೋಂಡ್ಕರ್ ಈಗ
ಸಂಗೀತವಾದ್ಯಗಳ ಜೊತೆ ಹಾಡುವ ಅಭ್ಯಾಸ ಮಾಡುತ್ತಿದ್ದಾರೆ. ನಟನೆ
ಬಿಟ್ಟು ಈ ಕಸರತ್ತಿಗೆ ಯಾಕೆ ಇಳಿದಿದ್ದಾರೆ ಎಂದರೆ ಆಶಾ
ಭೋಸ್ಲೆಯವರ ಮುಂಬರಲಿರುವ ಸ್ವಂತ ಅಲ್ಬಂನಲ್ಲಿ ಉರ್ಮಿಳಾ
ಹಾಡಲಿದ್ದಾರೆ!
ಇವೆಲ್ಲ
ಹೇಗಾಯಿತು ಅಂದರೆ ಉರ್ಮಿಳಾ ಮತ್ತು ಆಶಾ ಭೋಸ್ಲೆ ಇತ್ತೀಚೆಗೆ
ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು. ಅವರು ಇನ್ನೊಬ್ಬರ
ಹತ್ತಿರ `ರಂಗೀಲಾ' ಚಿತ್ರದಲ್ಲಿ ಉರ್ಮಿಳಾ ಅವರಿಗೆ ಹಾಡಿದ್ದನ್ನು
ಹೇಳುತ್ತಿದ್ದರು. ಆಗ ಆಶಾ ಅವರಿಗೆ `ಚಮತ್ಕಾರ್' ಚಿತ್ರದಲ್ಲೂ ಉರ್ಮಿಳಾ
ಅವರಿಗೆ ಹಾಡಿದ್ದ `ಬಿಛೂ, ಯೆ ಬಿಛೂ ಮುಜೆ ಕಾಟ್ ಜಾಯೇಗಾ'
ಹಾಡನ್ನು ಉರ್ಮಿಳಾ ಹಾಡಿಯೇ ಜ್ಞಾಪಿಸಿದರು ಅಷ್ಟೆ. ಮರುದಿನವೇ
ಆಶಾರವರಿಂದ ಉರ್ಮಿಳಾ ಅವರಿಗೆ ಕರೆ ಬಂದಿತ್ತು ಅವರ ಮುಂದಿನ
ಅಲ್ಬಂನಲ್ಲಿ ಹಾಡಲು. ಹಿಂದೆಮುಂದೆ ನೋಡದೆ ಉರ್ಮಿಳಾ ಒಪ್ಪಿದರು.
ಅಲ್ಬಂನ ರೆಕಾರ್ಡಿಂಗ್ ಮುಂದಿನವಾರದಿಂದ ನಡೆಯಲಿದೆ.
ಈ ಅಲ್ಬಂನ ಮೂಲಕ ಹೊಸ ಕರಿಯರ್ ಶುರು ಮಾಡುತ್ತಿರೋ ಎಂದು
ಕೇಳಿದರೆ `ನಾನು ಹಾಡುವುದಷ್ಟೇ ಅಲ್ಲ, ಪೇಂಟಿಂಗ್ ಕೂಡಾ
ಮಾಡುತ್ತೇನೆ. ಆದರೆ ಅದರಿಂದ ಪ್ರಸಿದ್ಧಿ ಹೊಂದುವಷ್ಟು ಚೆನ್ನಾಗಿ
ಮಾಡಲಾರೆ. ಹಾಡುವುದನ್ನು ಕೂಡಾ ಆಶಾಜಿ ಅಂತಹ ಅತ್ಯುತ್ತಮ
ಹಾಡುವವರಿಗೆ ಬಿಟ್ಟುಬಿಡುತ್ತೇನೆ. ಆದರೆ ಒಂದು
ಸಂತೋಷವೇನೆಂದರೆ, ನಾನು ಪೇಂಟಿಂಗ್‌ಗಿಂತಾ ಹಾಡನ್ನೇ ಚೆನ್ನಾಗಿ
ಹೇಳುತ್ತೇನೆ ಎಂದು' ನಗುತ್ತಾರೆ.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ ದಿ ಎಕಾನಾಮಿಷ್ಟ್ ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|