Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 13 November 2006 04:16 PM

ಸಾಹಸಸಿಂಹನ ಮನೆಗೆ ಪುಟಾಣಿ ಸಿಂಹಿಣಿಯ ಆಗಮನ

 

ಬೆಂಗಳೂರು: ಕೊಂಚ ಅನಾರೋಗ್ಯದಿಂದ ಬಳಲುತ್ತಿದ್ದ ವಿಷ್ಣುವರ್ಧನ್ ಅವರಿಗೆ ಈಗ ಪರ್ವಕಾಲ. ವಿಷ್ಣುವರ್ಧನ್ ಮತ್ತೊಮ್ಮೆ ತಾತಾ ಆಗಿದ್ದಾರೆ. ವಿಷ್ಣು ಅವರ ಆತ್ಮೀಯ ಗೆಳೆಯ ಅಂಬರೀಷ್ ಕೇಂದ್ರದ ಮಂತ್ರಿ ಆಗಿದ್ದಾರೆ.
 

ಇತ್ತೀಚಿಗೆ ವಿಷ್ಣು ಅವರ ಅಳಿಯ ನಟ ಅನಿರುದ್ಧ್ ಜತ್ಕರ್ ಅವರ ಪತ್ನಿ ಕೀರ್ತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಅನಿರುದ್ಧ್ ಹಾಗೂ ಕೀರ್ತಿ ದಂಪತಿಗಳಿಗೆ ಜ್ಯೇಷ್ಠವರ್ಧನ್ ಎಂಬ ಪೋರನನ್ನು ಹೊಂದಿದ್ದಾರೆ. ಮನೆಗೆ ಬಂದ ಪುಟ್ಟ ಪೋರಿಗೆ ಶ್ಲೋಕ ಎಂಬ ಹೆಸರಿಟ್ಟಿದ್ದಾರೆ. ವಿಷ್ಣು ಮನೆಯಲ್ಲಿ ಇನ್ನು ಶ್ಲೋಕ ಗಾಯನ ಖಂಡಿತಾ.
 

ಗಿನ್ನಿಸ್ ದಾಖಲೆಗೆ ಕಿಶನ್ ಚಿತ್ರ

 

ಬೆಂಗಳೂರು: ಕೇರಾಫ್ ಫುಟ್ ಪಾತ್ ಚಿತ್ರವನ್ನು ಚಿಕ್ಕ ಪ್ರಾಯದಲ್ಲೇ ನಿರ್ದೇಶನ ಮಾಡಿದ ಮಾಸ್ಟರ್ ಕಿಶನ್ ಅವರ ಹೆಸರು ಗಿನ್ನಿಸ್ ದಾಖಲೆಗೆ ಸೇರಿದೆ.Master Kishan with camera
 

ಗಿನ್ನಿಸ್ ದಾಖಲೆಗಾಗಿ ಅರ್ಜಿ ಈ ಮುಂಚೆನೇ ಸಲ್ಲಿಸಲಾಗಿತ್ತು, ಈಗ ಗಿನ್ನಿಸ್ ಸಂಸ್ಥೆಯಿಂದ ಅಧಿಕೃತ ಪತ್ರ ಈಗ ಕಿಶನ್ ಕೈ ಸೇರಿದೆ.
 

೧೧ ವರ್ಷದ ಕಿಶನ್ ನಿರ್ದೇಶನದ `ಕೇರಾಫ್ ಫುಟ್‌ಪಾತ್' ಚಿತ್ರವು ಕೊಳೆಗೇರಿ ಮಕ್ಕಳ ಜೀವನವನ್ನು ಕುರಿತಾದ ಕಥೆಯನ್ನು ಹೊಂದಿದೆ.
 

ಜಾಕಿ ಶ್ರಾಫ್, ಅಂಬರೀಷ್, ಸುದೀಪ್ ಮುಂತಾದ ಜನಪ್ರಿಯ ತಾರಾಬಳಗವನ್ನು ಈ ಚಿತ್ರವು ಹೊಂದಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.


ಗೋವಾ ಚಿತ್ರೋತ್ಸವ: ತನನಂ ತನನಂ ಪ್ರವೇಶ

 

ಬೆಂಗಳೂರು: ಗೋವಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್ ನಿರ್ದೇಶನದ `ತನನಂ ತನನಂ' ಚಿತ್ರ ಪ್ರದರ್ಶನಗೊಳ್ಳಲಿದೆ.
 

ಖ್ಯಾತ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ನಾಟಕಕಾರ ಗಿರೀಶ್ ಕಾರ್ನಾಡ್ ಅಭಿನಯದ ಈ ಚಿತ್ರದಲ್ಲಿ ಮೊದಲ ಬಾರಿಗೆ ರಮ್ಯ ಹಾಗೂ ರಕ್ಷಿತಾ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ನವೆಂಬರ್ ೨೪ರಂದು ರಾಜ್ಯದಾದ್ಯಂತ `ತನನಂ ತನನಂ' ಚಿತ್ರ ಬಿಡುಗಡೆಗೊಳ್ಳಲಿದೆ.
 

ಕವಿತಾ ಲಂಕೇಶ್ ಅವರ ದೇವೀರಿ ಚಿತ್ರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಅನೇಕ ಪ್ರಶಸ್ತಿಗಳನ್ನು ಗಳಿಸಿತ್ತು.

 

ಇನ್ನಷ್ಟು

 

ಸ್ಯಾಮ್ ಪಿತ್ರೋಡಗೆ ದಿ ಎಕಾನಾಮಿಷ್ಟ್ ನಿಂದ ಗೌರವ

ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ

ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ

ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ

ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ

ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ

ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com