|
ವಿಶ್ವಸಂಸ್ಥೆಯ ಪ್ರಶಂಸೆಗೊಳಗಾದ `ಲಗೇ ರಹೊ ಮುನ್ನ ಭಾಯಿ'
ಅಮೇರಿಕಾ: ಖ್ಯಾತ ನಟ ಸಂಜಯ್ ದತ್ ಅಭಿನಯದ `ಲಗೇ
ರಹೋ ಮುನ್ನಭಾಯಿ' ಚಿತ್ರವನ್ನು ವಿಶ್ವಸಂಸ್ಥೆಯ ಸಭಾಂಗಣದಲ್ಲಿ
ಪ್ರದರ್ಶಿಸಲಾಯಿತು.
ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಚಳುವಳಿಯ
ಸಂಸ್ಮರಣೆಯ ಅಂಗವಾಗಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಭಾರತದ ಚಲನಚಿತ್ರವೊಂದು ಪೂರ್ಣಾವಧಿ ಪ್ರದರ್ಶನಗೊಂಡಿದ್ದು
ಇz ಮೊದಲು. ಶುಕ್ರವಾರ ಸಂಜೆ ಪ್ರದರ್ಶನಗೊಂಡ ೧೪೫
ನಿಮಿಷಗಳ `ಲಗೇ ರಹೋ ಮುನ್ನಾಭಾಯಿ' ಚಲನಚಿತ್ರವು ಮಹಾತ್ಮ
ಗಾಂಧಿಯವರ ತತ್ವ ಪರಿಪಾಲೆನೆಯ ಮೇಲೆ ಆಧಾರಿತವಾಗಿದೆ.
ಗಾಂಧೀಜಿಯವರ ತತ್ವ ಪಾಲನೆಗಾಗಿ ಈ ಚಿತ್ರದಲ್ಲಿ `ಗಾಂಧೀಗಿರಿ' ಎಂಬ
ಹೊಸ ಪರಿಕಲ್ಪನೆಯನ್ನು ಸೃಷ್ಟಿಸಲಾಗಿದೆ.
ಈ ಚಿತ್ರದಲ್ಲಿನ ಹಾಸ್ಯ ಸನ್ನಿವೇಶದ ಜೊತೆಗೆ ಗಾಂಧೀಜಿಯ ತತ್ವದ
ಅಳವಡಿಕೆಯ ಬಗ್ಗೆ ವಿಶ್ವಸಂಸ್ಥೆಯ ರಾಯಭಾರಿಗಳು, ಸಿಬ್ಬಂದಿ
ಹಾಗೂ ಪತ್ರಕರ್ತರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿನೋದ್ ಚೋಪ್ರಾ ನಿರ್ಮಾಣದ ಈ ಚಿತ್ರವನ್ನು ರಾಜ್ ಕುಮಾರ್ ಹಿರಾಣಿ
ನಿರ್ದೇಶಿಸಿದ್ದಾರೆ. ಸಂಜಯ್ ದತ್ ಜೊತೆಗೆ, ವಿದ್ಯಾ ಬಾಲನ್ ಹಾಗೂ
ಅರ್ಷದ್ ವಾರ್ಸಿ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ.
ಇನ್ನಷ್ಟು
ಭದ್ರಾ ಮೇಲ್ದಂಡೆ ಯೋಜನೆಗೆ ಸಂಪುಟ ಒಪ್ಪಿಗೆ
ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದ ರಾಜ್ಯ ಸಂಪುಟ
ದಾವಣಗೆರೆ ಅಭಿವೃದ್ಧಿಗೆ ೮೮.೫೦ ಕೋಟಿ ರೂ. ಬಿಡುಗಡೆ
ಅಮೇರಿಕಾದ
ಚುನಾವಣೆಯಲ್ಲಿ
ಸತ್ತವರೂ ಗೆಲ್ಲಬಹುದು
ಬುಷ್‌ಗೆ ಮುಖಭಂಗ ಮಾಡಿದ ಚುನಾವಣೆ
ಮಂಗಳೂರು ಗಲಭೆ: ೩೭೦ ಅಹವಾಲುಗಳ ಸ್ವೀಕಾರ
ಶಾಲಾಭಿವೃದ್ಧಿ ಸಮಿತಿಗಳಿನ್ನು ರಾಜಕೀಯದಿಂದ ಮುಕ್ತ
ರಾಜ್ಯದಿಂದ ೬,೦೦೦ಕ್ಕೂ ಅಧಿಕ ಜನ ಹಜ್ ಯಾತ್ರೆಗೆ
ಇಥೆನಾಲ್ ಬೆರತ ಪೆಟ್ರೋಲ್ ಬಳಕೆಗೆ ಭಾರತ ಇಂಗಿತ
ಚಾಮುಂಡೇಶ್ವರಿ ಉ.ಚ: ರಾಜಕೀಯ ಬೆಳವಣಿಗೆಗಳು
ಭೂ ಕಬಳಿಸಿದ ಅಂಗಡಿಗಳಿಗೆ ಬೆಂ.ಮ.ಪಾ ಬೀಗ ಮುದ್ರೆ
ಭಯೋತ್ಪಾದಕತೆ : ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
|