|
ಸಂಜಯ್‌ನ ಮಾನ ತೆಗೆಯದಿದ್ದರೆ ಸಾಕು ಈ ಮಾನ್ಯತಾ
ಮದುವೆಯಾಗಲು ಸಂಜಯ್ ದತ್ ಆರಿಸಿದ್ದು ಸಿ-ಗ್ರೇಡ್ ನಟಿ
ಮಾನ್ಯತಾ ಎಂದು ಮುಂಬೈ ಟೆಬ್ಲೋಯ್ಡ್ ಪತ್ರಿಕೆಯೊಂದು
ವರದಿಮಾಡಿದೆ.

ಈ ಮೊದಲು ಮಾನ್ಯತಾ ಅಪರಾಧಿ ಮನೋಶಾಸ್ತ್ರಜ್ಞೆಯಾಗಿ ಕೆಲಸ
ಮಾಡುತ್ತಿದ್ದಳು ಎನ್ನುವುದೆಲ್ಲ ಸುಳ್ಳು. ಬದಲಾಗಿ ಅವಳು ಸಿ-ಗ್ರೇಡ್
ನಟಿಯಾಗಿದ್ದು ಪ್ರಕಾಶ್ ಝಾ ಅವರ `ಗಂಗಾಜಲ್'ದಲ್ಲಿ ಐಟಂ ಹಾಡಿಗೆ
ಹೆಜ್ಜೆಹಾಕಿದ್ದಳು. ಪರದೆಯ ಅವಳ ಹೆಸರು ಸಾರಾ ಖಾನ್ ಎಂದು
ಹೇಳಲಾಗುತ್ತಿದೆ. ಬೆಂಕಿಗೆ ತುಪ್ಪ ಸುರಿಯುವಂತೆ ಈ ನಾಲ್ಕು
ವರ್ಷದಲ್ಲಿ ಮೂರು ಗಂಡಂದಿರನ್ನು ಬದಲಿಸಿದ್ದಾಳೆ. ಹಿಂದಿನ ವರ್ಷ
ಅಕ್ಟೋಬರ್‌ನಲ್ಲಿ ಅವಳ ಗಂಡನಾಗಿದ್ದ ಮೈರಾಜ್, ಕರೀನಾ ಕಪೂರ್‌ಗೆ
ಅಶ್ಲೀಲ ಎಸ್ಸೆಮ್ಮೆಸ್ ಕಳಿಸಿ ಪೊಲೀಸ್ ಅತಿಥಿಯಾಗಿದ್ದಾನೆ. ಆದರೆ
ಮಾನ್ಯತಾ ತನ್ನ ಒಂದು ಮದುವೆಯನ್ನು ಮಾತ್ರ
ಒಪ್ಪಿಕೊಳ್ಳುತ್ತಾಳೆ.
ಮಾರಕಾಸ್ತ್ರ ಹೊಂದಿದ ಆರೋಪದಲ್ಲಿ ಹಣ್ಣು-ಗಾಯಿ ನೀರುಗಾಯಿ ಆಗಿದ್ದ
`ಮುನ್ನಾ ಭಾಯಿ' ಜೀವನದಲ್ಲಿ ಅನಿರೀಕ್ಷಿತ ತಿರುವುಗಳೇ
ಹೆಚ್ಚಾಗಿಬಿಟ್ಟಿವೆ. ಮಗಳು ತ್ರಿಷಲಾಗೆ ತನ್ನೆಲ್ಲ ಸಮಯವನ್ನು
ಮುಡಿಪಾಗಿಡಲು ಮಾಜಿ ಗೆಳತಿ ನಾದಿಯಾಳನ್ನು ಬಿಟ್ಟೆ ಎಂದು ಹೇಳಿದ್ದ
ಇದೇ ಸಂಜಯ್ ಮಾನ್ಯತಾಳನ್ನು ಮದುವೆಯಾಗುತ್ತೇನೆ ಎಂದು
ಹೊರಟಿದ್ದಾರೆ. ಇದೇನೆ ಇದ್ದರೂ, `ಮುನ್ನಾ ಬಾಯಿ'ಯಾಗಿ ಪುನಃ
ಮರ್ಯಾದಿ ಗಳಿಸುತ್ತಿರುವ ಸಂಜಯ್‌ನ ಮರ್ಯಾದಿ
ತೆಗೆಯದಿದ್ದರೆ ಸಾಕು ಈ ಮಾನ್ಯತಾ.
ಇನ್ನಷ್ಟು
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ
ಉಡಾವಣೆ
ಬೆಂಗಳೂರು ಡ್ರೀಮ್ಸ್:
ಎಸ್ಸೆಮ್ಮೆಸ್‌ನಿಂದಲೂ ಮಾಹಿತಿ
ಮಂಗಳೂರಿನಲ್ಲಿ ಉಗ್ರ
ಮುಖಂಡನ ಸೆರೆ?
ಲಂಚಕೋರ ಸಂಸದರ
ವಜಾ ಸರಿ: ಸುಪ್ರೀಂ ಕೋರ್ಟ್
ಮುಲಾಯಂ ಸರ್ಕಾರದ
ಮೇಲೆ ತೂಗುತ್ತಿರುವ ಕತ್ತಿ
ಮಕ್ಕಳ ಮಾಂಸ
ತಿನ್ನುತ್ತಿದ್ದ ನೋಯ್ಡಾ ಹಂತಕರು
ಪಶ್ಚಿಮ ಬಂಗಾಳ ಬಂದ್
ಯಶಸ್ವಿ
|