|
ವಿವಾಹ ಚಿತ್ರ: ಬಿಡುಗಡೆಯದಿನವೇ ಡೌನ್‌ಲೋಡ್‌ಗೂ ಲಭ್ಯ
ರಾಜಶ್ರೀ ಮೀಡಿಯಾ ಎಂಟರ್‌ಟೈನ್‌ಮೆಂಟ್ ತನ್ನ ಚಲನಚಿತ್ರ, ಮ್ಯುಸಿಕ್
ವಿಡಿಯೋ, ದೂರದರ್ಶನ ಧಾರವಾಹಿಗಳನ್ನು ಡೌನ್‌ಲೋಡ್
ಮಾಡಿಕೊಳ್ಳಲು 'www.rajshree.com' ನಲ್ಲಿ ಅವಕಾಶ ನೀಡಿದೆ. ಇವಲ್ಲದೆ
ಡಾಕ್ಯುಮೆಂಟರಿಗಳು, ಕಿರುಚಿತ್ರಗಳನ್ನು ಕೂಡಾ ಡೌನ್‌ಲೋಡ್
ಮಾಡಿಕೊಳ್ಳಬಹುದಾಗಿದೆ ಎಂದು ರಾಜಶ್ರೀ ಮೀಡಿಯಾದ ವ್ಯವಸ್ಥಾಪಕ
ನಿರ್ದೇಶಕ ರಜ್ಜತ್ ಬರ್ಜತ್ಯಾ ತಿಳಿಸಿದ್ದಾರೆ.
ಎನ್‌ಆರ್‌ಐಗಳನ್ನೇ ಮೂಲ ಗುರಿಯನ್ನಾಗಿ ಮಾಡಿಕೊಂಡಿರುವ ಈ
ಪೋರ್ಟಲ್‌ಗಳಿಂದ ಗ್ರಾಹಕರು ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ
ಮೂಲಕ ಮಾತ್ರ ಚಲನಚಿತ್ರಗಳನ್ನು ಡೌನ್‌ಲೋಡ್
ಮಾಡಿಕೊಳ್ಳಬಹುದಾಗಿದೆ.
ಕಂಪೆನಿ ತನ್ನ ಇತ್ತೀಚಿನ ಚಲನಚಿತ್ರ `ವಿವಾಹ'ವನ್ನು ಡೌನ್‌ಲೋಡ್
ಮಾಡಿಕೊಳ್ಳಲು ಅವಕಾಶ ನೀಡುವ ಮೂಲಕ ಬಿಡುಗಡೆಯಾದ ದಿನವೇ
ಅಂತರ್ಜಾಲದಲ್ಲೂ ಅದು ಸಿಗುವ ಮೊತ್ತಮೊದಲ ಭಾರತೀಯ ಚಲನಚಿತ್ರ
ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದರೆ ಈ ಚಲನಚಿತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿರ್ದಿಷ್ಟವಾಗಿ
ಎಷ್ಟು ವೆಚ್ಚವಾಗುತ್ತದೆ ಎಂದು ಹೇಳಲಿಲ್ಲ.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
|