|
ಚಿತ್ರರಂಗಕ್ಕೆ ಮರು ಪ್ರವೇಶ ಮಾಡುತ್ತಿರುವ ವಿನೋದ್ ಖನ್ನಾ
ಕೌಟುಂಬಿಕ ಮತ್ತು ಥ್ರಿಲ್ಲರ್ ಕಥಾವಸ್ತು ಉಳ್ಳ `ರಿಸ್ಕ್' ಎನ್ನುವ
ಚಲನಚಿತ್ರದ ಮೂಲಕ ವಿನೋದ್ ಖನ್ನಾ ಬಾಲಿವುಡ್‌ಗೆ ಮರು ಪ್ರವೇಶ
ಮಾಡುತ್ತಿದ್ದಾರೆ.
`ಸಿನಿಮಾ ಜೀವನದಲ್ಲಿ ನನಗೆ ವೈವಿಧ್ಯಮಯ ಪಾತ್ರಗಳನ್ನು
ನಿರ್ವಹಿಸುವ ಅವಕಾಶ ಸಿಕ್ಕಿರಿರುವುದರಿಂದ ಬಹಳ ಖುಷಿಯಾಗಿದೆ. ಬಹಳ
ಸಮಯದ ನಂತರ ಮತ್ತೆ ನಟಿಸುತ್ತಿದ್ದೇನೆ. `ರಿಸ್ಕ್' ನಲ್ಲಿ ನನ್ನ
ಪಾತ್ರವು ಬಹಳ ಛಾಲ್ಲೆಂಜಿಂಗ್ ಆಗಿದೆ. ಇಂದಿನ ದಿನಗಳಲ್ಲಿ ನಮ್ಮ
ತಲೆಮಾರಿನ ಜನರಿಗೆ ತಕ್ಕುದಾದ ಪಾತ್ರ ಬಹಳ ವಿರಳ. ಆದರೆ
ಉತ್ತಮ ಪಾತ್ರಗಳು ಸಿಕ್ಕಲ್ಲಿ ಖಂಡಿತವಾಗಿಯೂ ನಟಿಸುತ್ತೇನೆ.
ಬೇಕಿದ್ದಲ್ಲಿ ಅದು ನೆಗೆಟಿವ್ ಪಾತ್ರವೇ ಆಗಿರಲಿ' ಎಂದು ಹುಮ್ಮಸ್ಸಿನಿಂದ
ಹೇಳುತ್ತಾರೆ.
ವಿಶ್ರಮ್ ಸಾವಂತ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಖನ್ನಾ ಒಬ್ಬ
ಗ್ಯಾಂಗ್‌ಸ್ಟರ್ ಆಗಿ ನಟಿಸಲಿದ್ದಾರೆ. `ಈ ಪಾತ್ರ ನನಗೆ ಬಹಳ
ಸಂತೋಷವನ್ನು ಕೊಟ್ಟಿದೆ. ಏಕೆಂದರೆ ಇದು ವಿಭಿನ್ನವಾಗಿ ಮತ್ತು
ವಾಸ್ತವಿಕವಾಗಿದೆ' ಎಂದು `ರಿಸ್ಕ್'ನ ತಮ್ಮ ಪಾತ್ರದ ಬಗ್ಗೆ ಹರ್ಷ
ವ್ಯಕ್ತಪಡಿಸಿದರು.
ತಾರಾಗಣದಲ್ಲಿ ರಣದೀಪ್ ಹೂಡಾ, ತನುಶ್ರಿ ದತ್ತ ಮತ್ತಿತರಿದ್ದಾರೆ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|