|
ವೀಕ್ಷಕರೇ ನನ್ನ ಪ್ಲಸ್ ಪಾಯಿಂಟ್: ಜಾನ್ ಅಬ್ರಾಹಂ
ಜಾನ್ ಅಬ್ರಾಹಂ ನಟಿಸಿದ ಬಹು ನಿರೀಕ್ಷಿತ `ಬಾಬುಲ್' ಮತ್ತು `ಕಾಬೂಲ್
ಎಕ್ಸ್‌ಪ್ರೆಸ್' ಎರಡೂ ಚಿತ್ರಗಳು ಜೊತೆ-ಜೊತೆಗೆ
ಬಿಡುಗಡೆಯಾಗುತ್ತಿವೆ.
`ಬಾಬುಲ್' ಒಂದು ಸಾಂಸಾರಿಕ ಚಿತ್ರವಾಗಿದೆ. ಇದರಲ್ಲಿ ಜಾನ್ ಅವರದ್ದು
ಪ್ರೀತಿಗಾಗಿ ಎಂಥ ತ್ಯಾಗವನ್ನಾದರೂ ಮಾಡುವ ಸಾಧಾರಣ
ವ್ಯಕ್ತಿಯದ್ದು. ಅವನಿಗೆ ಮಿಲಿ (ರಾಣಿ ಮುಖರ್ಜಿ) ಮೇಲೆ ಪ್ರೀತಿ
ಹುಟ್ಟುತ್ತದೆ.

ಆದರೆ `ಕಾಬೂಲ್ ಎಕ್ಸ್‌ಪ್ರೆಸ್' ಒಂದು ಕಲಾತ್ಮಕ ಚಿತ್ರವಾಗಿದೆ. ಇದರಲ್ಲಿ
ಜಾನ್ ಪಾತ್ರ ಬಾಬೂಲ್‌ದಲ್ಲಿನ ಪಾತ್ರಕ್ಕಿಂತ ಸಂಪೂರ್ಣ ಭಿನ್ನವಾಗಿದೆ.
ಅಪಘಾನಿಸ್ತಾನದಲ್ಲಿ ಇದರ ಚಿತ್ರೀಕರಣ ಮಾಡಲಾಗಿದ್ದು ಅಪಘಾನಿಸ್ತಾನ,
ಪಾಕಿಸ್ತಾನದ ಕಲಾವಿದರು ತಾರಾಗಣದಲ್ಲಿದ್ದಾರೆ. ಈ ಎರಡೂ ಚಿತ್ರಗಳು
ಸಂಪೂರ್ಣ ಭಿನ್ನವಾಗಿದೆ. `ಜಾನ್ `ಬಾಬುಲ್' ನಂತಹ ಚಿತ್ರಗಳಲ್ಲಿಯೂ
ನಟಿಸಬಲ್ಲ, `ಕಾಬೂಲ್ ಎಕ್ಸ್‌ಪ್ರೆಸ್' ನಂತಹ ಚಿತ್ರಗಳಲ್ಲಿಯೂ
ನಟಿಸಬಲ್ಲ ಎಂದು ದರ್ಶಕರಿಗೆ ತಿಳಿಯಲು ಅವಕಾಶವಾಗುತ್ತದೆ' ಎಂದು
ಜಾನ್ ಹೇಳುತ್ತಾರೆ.
ಅಬ್ರಾಹಂ ಮಾಡೆಲಿಂಗ್‌ನಿಂದ ಆಕ್ಟಿಂಗ್ ಕ್ಷೇತ್ರಕ್ಕೆ ಕಾಲಿರಿಸಿ ಕೇವಲ
ಮೂರು ವರ್ಷಗಳಾಗಿವೆ. ದರ್ಶಕರೇ ನನ್ನ ಪ್ಲಸ್ ಪಾಯಿಂಟ್ ಎಂದು
ಹೇಳುವ ಜಾನ್, ಇನ್ನೂ ೨-೩ ವರ್ಷ ಹೀಗೆ ಉತ್ತಮ ಅವಕಾಶಗಳು
ದೊರೆತರೆ ಇದಕ್ಕಿಂತ ಉತ್ತಮವಾಗಿ ಕೆಲಸ ಮಾಡುವ ಆಸೆ
ವ್ಯಕ್ತಪಡಿಸುತ್ತಾರೆ.
ಇನ್ನಷ್ಟು
ಚುನಾವಣೆ ಗೆಲ್ಲಲು ಅಡ್ಡದಾರಿ
ಹಿಡಿದ ಪಕ್ಷಗಳು
ಮಮತಾ-ಮೇಧಾರನ್ನು
ತಡೆದ ಪೊಲೀಸ್
ಇ-ಸರ್ಕಾರ ನಿರ್ಮಿಸಲು
ಕೈಜೋಡಿಸಿದ ಎಚ್‌ಪಿ
ಮಂಗಳೂರಿಗೆ ಬಂದಿಳಿದ
ಮೊದಲ ಸಖಾಲಿನ್ ತೈಲ
ನೀತಿ ಸಂಹಿತೆ
ಉಲ್ಲಂಘನೆಯಾಗಿಲ್ಲ : ಕುಮಾರಸ್ವಾಮಿ
ವಿಧ್ಯುಕ್ತವಾಗಿ ಚಾಲನೆಗೊಂಡ
ದತ್ತ ಜಯಂತಿ
ನಿಮ್ಮ ಸಾಧನೆ ದಾಖಲೆ
ಪುಸ್ತಕಕ್ಕೆ ನೀಡಿ
|