|
೧೦ ಕನ್ನಡ(?) ನಿರ್ಮಾಪಕರಿಗೆ ಬಹಿಷ್ಕಾರ
ಬೆಂಗಳೂರು: ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್
ಮಾಡಿ ಆ ಚಿತ್ರದ ಕಲಾವಿದರ ಕಟೌಟ್‌ಗಳನ್ನು ನಿಲ್ಲಿಸುವುದಾಗಿ ಕನ್ನಡ
ಚಿತ್ರಕಲಾವಿದರಿಗೆ ಬೆದರಿಕೆ ಹಾಕಿದ್ದ ನಿರ್ಮಾಪಕರ ಯಾವುದೇ
ಚಿತ್ರೀಕರಣ ಚಟುವಟಿಕೆಗಳಲ್ಲಿ ಭಾಗವಹಿಸದಿರಲು `ಕರ್ನಾಟಕ
ಚಲನಚಿತ್ರ ಕಾರ್ಮಿಕರ, ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ'
ನಿರ್ಧರಿಸಿದೆ.
ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ
ಮತ್ತು ನಟ ಅಶೋಕ್ ಈ ವಿಷಯ ತಿಳಿಸಿದರು.
`ಡಬ್ಬಿಂಗನ್ನು ಸಮರ್ಥಿಸುವ ಕನ್ನಡ ದ್ರೋಹಿ ನಿರ್ಮಾಪಕರ
ಚಿತ್ರೀಕರಣ ಚಟುವಟಿಕೆಯಲ್ಲಿ ಒಕ್ಕೂಟದ ಸದಸ್ಯರು ಯಾರೂ
ಭಾಗವಹಿಸುವುದಿಲ್ಲ. ನಾವು ಡಬ್ಬಿಂಗನ್ನು ತೀವ್ರವಾಗಿ
ವಿರೋಧಿಸುತ್ತೇವೆ' ಎಂದು ಅಶೋಕ್ ಹೇಳಿದರು.
`ಕನ್ನಡ ಕಲಾವಿದರನ್ನು ದೂರವಿಡಲು ಡಬ್ಬಿಂಗ್ ಚಿತ್ರವನ್ನು
ಮಾಡುವುದಾಗಿ ತಮಗೆ ತಾವೇ ನಿಬಂಧನೆಯನ್ನು ಹಾಕಿಕೊಂಡ
ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘದವರಿಗೆ ಧನ್ಯವಾದಗಳು'
ಎಂದು ಅಶೋಕ್ ವ್ಯಂಗ್ಯವಾಡಿದರು.
ಕಲಾವಿದರ ಬಹಿಷ್ಕಾರಕ್ಕೆ ಒಳಗಾದ ನಿರ್ಮಾಪಕರು: ಮುನಿರತ್ನಂ
ನಾಯ್ಡು, ಕೆ. ಮಂಜು, ಎನ್. ಕುಮಾರ್, ಸಂದೇಶ್ ನಾಗರಾಜ್,
ಗಣೇಶ್, ಪ್ರವೀಣ್ ಕುಮಾರ್, ಭಾ. ಮಾ. ಹರೀಶ್, ರಾಜೇಂದ್ರ
ಸಿಂಗ್ ಬಾಬು, ಮೋಹನ್, ಉಮೇಶ್ ಬಣಕಾರ್.
  
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|