Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 03 November 2006 05:39 PM

ಸ್ವಂತ ಚಿತ್ರವನ್ನು ನಿರ್ದೇಶಿಸಲಿರುವ ಅಮೀರ್

 

ಅಮೀರ್ ಖಾನ್ ತಮ್ಮ ಅಭಿನಯವನ್ನು ಬಹಳ ಅಚ್ಚುಕಟ್ಟಾಗಿ ಮುಗಿಸುವಂತವರು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ತಾವೇ ಕೈಯಾರೆ ನಿರ್ಮಿಸುತ್ತಿರುವ ಚಿತ್ರ ಅಚ್ಚುಕಟ್ಟಾಗಿಲ್ಲದಿದ್ದರೆ?!
Amir Khan

ಅಮೀರ್ ಸ್ವಂತ ಬ್ಯಾನರ್‌ನ ಅಡಿಯಲ್ಲಿ `ತಾರೆ ಜಮೀನ್ ಪೆ' ಎನ್ನುವ ಚಿತ್ರ ನಿರ್ಮಿಸುತ್ತಿದ್ದಾರೆ. ಅಮೀರ್ ಈ ಚಿತ್ರದ ನಿರ್ದೇಶನದ ಹೊಣೆಯನ್ನು ಅಮೋಲ್ ಗುಪ್ತೆಗೆ ವಹಿಸಿಕೊಟ್ಟಿದ್ದರು. ಆದರೆ ಗುಪ್ತೆ ಅವರ ಕೆಲಸ ಯಾಕೋ ಅಮೀರ್‌ಗೆ ಹಿಡಿಸಲಿಲ್ಲ. ಚಿತ್ರವನ್ನು ಹೇಗೆ ನಿರ್ದೇಶಿಸಬೇಕು ಎನ್ನುವ ವಿಷಯದಲ್ಲಿ ಇಬ್ಬರಿಗೂ ಭಿನ್ನಾಭಿಪ್ರಾಯ ಉಂಟಾಗಿ, ಅಮೀರ್ ಅವರೇ ಈ ಚಿತ್ರವನ್ನು ನಿರ್ದೇಶಿಸಲು ಸಂಕಲ್ಪ ಮಾಡಿದ್ದಾರೆ.
 

ಅಮೀರ್‌ರನ್ನು ಈ ಬಗ್ಗೆ ಕೇಳಿದರೆ ಯಾವುದೇ ಸಂಕೋಚವಿಲ್ಲದೆ `ಒಂದಲ್ಲಾ ಒಂದು ದಿನ ನಿರ್ದೇಶಕನಾಗುವ ಕನಸು ಕಾಣುತ್ತಿದ್ದೆ. ಆದರೆ ಇಷ್ಟು ಬೇಗನೆ ಆಗುತ್ತೇನೆಂದು ಎಣಿಸಿರಲಿಲ್ಲ' ಎನ್ನುತ್ತಾರೆ.
 

ಗುಪ್ತೆಯವರನ್ನು ಚಿತ್ರತಂಡದಿಂದ ಸಂಪೂರ್ಣವಾಗಿ ಹೊರ ಹಾಕಿಲ್ಲ. ಅಮೀರ್ ಮತ್ತು ಗುಪ್ತೆ ಕೂಡಿಯೇ ನಿರ್ದೇಶನ ಮಾಡುತ್ತಿದ್ದಾರೆ.

 

ಪಂಚಗಣಿಯ `ನ್ಯೂ ಇರಾ ಹೈಸ್ಕೂಲ್'ನಲ್ಲಿ `ತಾರೆ ಜಮೀನ್ ಪೆ'ಯ ಚಿತ್ರೀಕರಣ ನಡೆಯುತ್ತಿದ್ದು ಇದೊಂದು ಮಕ್ಕಳ ಚಲನಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.
 

ಮುಖ್ಯ ಪಾತ್ರವನ್ನು ಅಮೀರ್ ಅವರೇ ನಿರ್ವಹಿಸುತ್ತಿದ್ದು ಶಂಕರ್-ಎಹೆಸಾನ್-ಲಾಯ್ ಅವರ ಸಂಗೀತವಿದೆ

 

ಇನ್ನಷ್ಟು

ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್

ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ

ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ

ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್

ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ

`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ

ನ.೧೬ರಿಂದ ಹೆಲ್ಮೆಟ್ ಕಡ್ಡಾಯ

ರಾಜ್ಯದಲ್ಲಿ ಸುವರ್ಣ ಸಂಭ್ರಮದ ಆಚರಣೆ

ಹೈ-ಕ ಗಡಿಯಲ್ಲಿ ನ.೧ರಂದು ಕಪ್ಪು ದಿನಾಚರಣೆ

ಸನ್ ಟಿವಿ ಯಿಂದ ೩ ಹೊಸ ಎಫ್‌ಎಂ ವಾಹಿನಿ

ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com