|
ಬಾಲಿವುಡ್‌ಗೆ ಮತ್ತೊಬ್ಬ ಬಿಗ್ ಬಿ?
ಶೋಲೆ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ರಿಮೇಕ್
ಮಾಡಲಿದ್ದಾರೆ ಎನ್ನುವುದು ಹಳೆ ಸುದ್ದಿ. ಮೂಲ ಶೋಲೆ ಚಿತ್ರದಲ್ಲಿ
ಅಮಿತಾಭ್ ಬಚ್ಚನ್ ನಿರ್ವಹಿಸಿದ್ದ `ಜಯ್' ಪಾತ್ರವನ್ನು ರಾಮ್
ಗೋಪಾಲರ ಚಿತ್ರದಲ್ಲಿ ಯಾರು ಮಾಡುತ್ತಾರೆ ಎನ್ನುವುದು
ಬಾಲಿವುಡ್‌ನಲ್ಲಿ ಬಹು ಚರ್ಚಿತ ವಿಷಯವಾಗಿತ್ತು. ಈಗ ಆ ಪ್ರಶ್ನೆಗೆ ರಾಜ್
ರೂಪದಲ್ಲಿ ಉತ್ತರ ದೊರೆತಿದೆ. ರಾಜ್ ಈ ಇಂಡಸ್ಟ್ರಿಗೆ ಹೊಸ ಹುಡುಗ.
೬ಅಡಿ ೩ಇಂಚು ಎತ್ತರದ ಭಯ ಹುಟ್ಟಿಸುವ ಆಳ್ತನ.

ಈ ಮೊದಲು ವರ್ಮಾರ ಎರಡು ಚಿತ್ರಗಳಲ್ಲಿ ನಟಿಸಿದ ಮೋಹಿತ್ `ಜೈ'
ಆಗಿ ಶೋಲೆ-೨ರಲ್ಲಿ ಮತ್ತೊಮ್ಮೆ ಕಣಕ್ಕಿಳಿಯುತ್ತಾರೆ ಎಂದು ಎಲ್ಲರೂ
ಭಾವಿಸಿದ್ದರು. ರಾಜ್ ಮೋಹಿತ್‌ಗಿಂತ ಹೇಗೆ ಹೆಚ್ಚು ಎಂದು ಕೇಳಿದರೆ
`ಇವೆಲ್ಲ ಪಾತ್ರಕ್ಕೆ ಸಂಬಂಧಿಸಿರುದು. ದೇಹ ಸೌಂದರ್ಯಕ್ಕೆ ಅಥವಾ
ಅನುಭವಕ್ಕೆ ಸಂಬಂಧಿಸಿದ್ದಲ್ಲ. ಈ ಪಾತ್ರಕ್ಕೆ ಅಮಿತಾಭ್‌ರನನ್ನು
ಹೋಲುವವರಿಗಾಗಿ ಹುಡುಕುತ್ತಿದ್ದೆ. ರಾಜ್ `ಜೈ' ಪಾತ್ರಕ್ಕೆ ಸರಿಯಾಗಿ
ಒಪ್ಪುತ್ತಾನೆ. ನೀವು ರಾಜ್‌ನ ಮೋಡಿಯಿಂದ ತಪ್ಪಿಸಿಕೊಳ್ಳಲಾಗದು'
ಎಂದು ಮೋಹಿತ್‌ರನ್ನು ಕೂಲಾಗಿ ಪಕ್ಕಕ್ಕೆ ಸರಿಸುತ್ತಾರೆ.
ವರ್ಮಾರ ಶೋಲೆಯಲ್ಲಿ ಅಜಯ್ ದೇವ್‌ಗನ್ ವೀರು ಮತ್ತು
ಅಮಿತಾಭ್ ಗಬ್ಬರ್ ಸಿಂಗ್ ಆಗಿ ನಟಿಸಲಿದ್ದಾರೆ.
ಇನ್ನಷ್ಟು
ಬಿಜೆಪಿ ನಾಯಕನ ಹತ್ಯೆ:
ಮರುಕಳಿಸಿದ ಹಿಂಸೆ
ಸಿದ್ಧು ಮೇಲಿದ್ದ ಕೊಲೆ
ಆರೋಪ ಸಾಬೀತು
ಜನರಿಗೆ ಹೊರೆಯಾದ
ಸರ್ಕಾರದ `ಕಡ್ಡಾಯಗಳು'
ಮಹಾರಾಷ್ಟ್ರದಲ್ಲಿ
ಭುಗಿಲೆದ್ದ ಹಿಂಸಾಚಾರ
ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ
ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ
ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ
|