|
ಅಭಿಷೇಕ್-ಹೃತಿಕ್‌ರನ್ನು ಹತ್ತಿರ ತಂದ ಧೂಮ್-೨
ಧೂಮ್-೨ದಲ್ಲಿ ಅಭಿಷೇಕ್ ಮತ್ತು ಹೃತಿಕ್ ಜೊತೆಗಿನ ಅಭಿನಯ
ಅವರಿಬ್ಬರನ್ನೂ ಸಾಕಷ್ಟು ಹತ್ತಿರ ತಂದಿದೆ. ಎರಡು
ವರ್ಷಕ್ಕೊಮ್ಮೆಯಾದರೂ ಜೊತೆಯಾಗಿ ಅಭಿನಯಿಸಬೇಕೆಂದು ಬೇರೆ
ಅಂದುಕೊಂಡಿದ್ದಾರಂತೆ. ಈ ಚಿತ್ರದ ನಂತರ ಹೃತಿಕ್ ಅಭಿಯಿಂದ ಬಹಳ
ಪ್ರಭಾವಿತರಾಗಿಬಿಟ್ಟಿದ್ದಾರೆ. `ಅಭಿಷೇಕ್ ಅತ್ಯುತ್ತಮ ನಟರಾಗಲು ಎಲ್ಲ
ಅರ್ಹತೆಯನ್ನೂ ಹೊಂದಿದ್ದಾರೆ. ಅವರಿಂದ ನಾನು ಬಹಳ ಕಲಿತೆ.
ನಾವಿಬ್ಬರು ಜೊತೆಯಾಗಿ ನಟಿಸುತ್ತಿರುವಾಗ ಯಾರು ಹೆಚ್ಚು
ಯಾರು ಕಡಿಮೆ ಎನ್ನುವ ಪ್ರಶ್ನೆಯೇ ಬರಲಿಲ್ಲ.' ಎಂದು
ಅಭಿಯನ್ನು ಬಾಯ್ತುಂಬ ಹೊಗಳುತ್ತಾರೆ.
ಹೃತಿಕ್ ಆಗಷ್ಟೇ ಅಶುತೋಷ್ ಗೋವಾರಿಕರ್‌ರ `ಜೋಧಾ ಅಕ್ಬರ್'
ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿ ಜೈಪುರದಿಂದ
ಹಿಂದಿರುಗಿದ್ದರು. ಇದರಲ್ಲೂ ಇಬ್ಬರು ಜೊತೆಯಾಗಿಯೇ
ನಟಿಸುತ್ತಿದ್ದಾರೆ.
ಧೂಮ್-೨ ದಲ್ಲಿ ಆರ್ಯನ್ ಆಗಿ ಹೃತಿಕ್ ನಟನೆ ಅಮೋಘ. `ನಾನು ಈ
ರೀತಿಯ ಪಾತ್ರವನ್ನು ಮೊದಲು ನಟಿಸಿರದಿದ್ದರಿಂದ ಜನರು ನನ್ನನ್ನು
ಇಷ್ಟ ಪಡಲು ಕಾರಣವೆನಿಸುತ್ತದೆ. ಆದರೆ ಧೂಮ್-೨ ಸಿನಿಮಾದ
ಪರಿಣಾಮ ಅಳೆಯಲು ಇನ್ನೂ ಸಮಯವಿದೆ' ಎನ್ನುವುದು ಹೃತಿಕ್
ಅಭಿಪ್ರಾಯ.
ಇನ್ನಷ್ಟು
ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ
ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ
ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ
ರಿಚರ್ಡ್ಸ್ ದಾಖಲೆ ಮುರಿದ ಮಹಮದ್ ಯೂಸಫ್
ವಿಟಿಯು: ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಭಾರತ-ಈಜಿಪ್ಟ್ ಐಟಿ
ಕ್ಷೇತ್ರದಲ್ಲಿ ಒಪ್ಪಂದ
ಆಯ್ಕೆ ಮಾಡಿ ಕೋರ್ಸ್
ಬದಲಾವಣೆ ಇಲ್ಲ : ಸಿಇಟಿ
ಭಾರಿ ಮೊತ್ತದ ಪ್ರಶಸ್ತಿಗೆ
ನಿರ್ಧಾರ : ಬೆಂಮಸಾಸಂ
ಶಿಬು: ಮೊದಲ ಕೊಲೆಗಾರ
ಕೇಂದ್ರ ಸಚಿವ
|