Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಆಗಸ್ಟ್೨೦: ಪುಸ್ತಕಲೋಕಕ್ಕೆ ಐದು ಪುಸ್ತಕಗಳು

ವಸುಧೇಂದ್ರ ಮತ್ತು ಎ.ಆರ್.ಮಣಿಕಾಂತ ಬರೆದ ಪುಸ್ತಕಗಳು ಓದುಗ ವಲಯಕ್ಕೆ

 

ಆಗಸ್ಟ್ ೨೦ರ ಭಾನುವಾರ ಎರಡು ಪುಸ್ತಕ ಬಿಡುಗಡೆ ಸಮಾರಂಭಗಳು ಬೆಂಗಳೂರು ನಗರದಲ್ಲಿ ನಡೆಯಲಿವೆ.

 

ಒಂದು ವಸುಧೇಂದ್ರ ತಮ್ಮ ನಾಲ್ಕು ಪುಸ್ತಕಗಳನ್ನು ಓದುಗರ ಕೈಗೆ ನೀಡಲು ಸಿದ್ಧರಾಗಿದ್ದಾರೆ. ಅದೃಶ್ಯ ಕಾವ್ಯ(ಬ್ರೈಲ್‌ನಲ್ಲಿ), ಚೇಳು, ನಮ್ಮಮ್ಮ ಅಂದ್ರೆ ನಂಗಿಷ್ಟ ಮತ್ತು ಮನೀಷೆ ಎಂಬ ನಾಲ್ಕು ಪುಸ್ತಕಗಳ ಅನಾವರಣ ಸಮಾರಂಭವನ್ನು ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ನಾಲ್ಕು ಪುಸ್ತಕಗಳನ್ನು ಛಂದ ಪ್ರಕಾಶನ ಪ್ರಕಟಿಸಿದೆ.

 

ಗಿರೀಶ್ ಕಾಸರವಳ್ಳಿ, ಓಎಲ್‌ಎನ್ ಸ್ವಾಮಿ, ಮಧು ಸಿಂಘಾಲ್ ಮತ್ತು ಅಪರ್ಣಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ.

 

ಎರಡನೆಯ ಸಮಾರಂಭ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ. ವಿಜಯಕರ್ನಾಟಕದ ಎ.ಆರ್. ಮಣಿಕಾಂತ್ ಬರೆದ ಈ ಗುಲಾಬಿಯು ನಿನಗಾಗಿ ಎಂಬ ಅಂಕಣಗಳ ಸಂಕಲನ ಅನಾವರಣಗೊಳ್ಳಲಿದೆ.

 

ಸಮಾರಂಭದ ಅತಿಥಿಗಳು - ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್, ಹಾಯ್ ಬೆಂಗಳೂರು ಸಾರಥಿ ರವಿಬೆಳಗೆರೆ. ಪುಸ್ತಕದ ಬಗ್ಗೆ ಸುಧಾ ಶರ್ಮ ಚವತ್ತಿ ಮಾತನಾಡುತ್ತಾರೆ. ಕಾರ್‍ಯಕ್ರಮ ಆರಂಭ ೧೧ ಗಂಟೆಗೆ.

 

ಪುಸ್ತಕ ಪ್ರಿಯರಿಗೆ ಸ್ವಾಗತ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com