ಡಾ.ರಾಜ್‌ಕುಮಾರ್ ಕುರಿತ ಪುಸ್ತಕ ಲೋಕಾರ್ಪಣೆ
ಬೆಂಗಳೂರು : ವರನಟ ಡಾ. ರಾಜ್‌ಕುಮಾರ್
ಜೀವನಶೈಲಿಯನ್ನು ಆಧರಿಸಿದ ಕನ್ನಡದ ಕಲಾ ಕಂಠೀರವ
ರಾಜ್‌ಕುಮಾರ್ ಎಂಬ ಕೃತಿ ಗುರುವಾರ ಅನಾವರಣಗೊಂಡಿತು.
ಗೌರಿಸುಂದರ್ ಸಂಪಾದಿಸಿರುವ ಈ ಕೃತಿಯನ್ನು
ಪಾರ್ವತಮ್ಮ ರಾಜ್‌ಕುಮಾರ್ ಮತ್ತು ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯ
ಬಿಡುಗಡೆ ಮಾಡಿದರು. ಈ ಕೃತಿಯಲ್ಲಿ ೩೭೦ ಅಪರೂಪದ ಚಿತ್ರಗಳಿವೆ.
ವಿವಿಧ ಕ್ಷೇತ್ರದ ಸಾಧಕರು ರಾಜ್‌ಕುಮಾರ್ ಬಗ್ಗೆ ಲೇಖನಗಳನ್ನು
ಬರೆದಿದ್ದಾರೆ.
ಪುಸ್ತಕ ಬಿಡುಗಡೆ ಕಾರ್‍ಯಕ್ರಮದಲ್ಲಿ ಸಿ. ವಿ.
ಎಲ್. ಶಾಸ್ತ್ರಿ, ಡಿ. ಬಿ. ಬಸವೇಗೌಡ, ಸಿ. ವಿ . ಶಿವಶಂಕರ್, ವಿ. ಎನ್. ಸುಬ್ಬರಾವ್,
ಪಾಣ್ಯಂ ನಟರಾಜ್, ಡಿ. ಎಸ್. ವೀರಯ್ಯ, ಗೀತ ಪ್ರಿಯ, ಡಾ. ಭುಜಂಗ
ಶೆಟ್ಟಿ, ಡಾ. ಸಿ. ಸೋಮಶೇಖರ್ ಮತ್ತಿತರನ್ನು ಸನ್ಮಾನಿಸಲಾಯಿತು.