Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಕನ್ನಡದ ಮೊದಲ ಬ್ರೈಲ್ ಪುಸ್ತಕ ಅನಾವರಣ

ಓದುಗ ವಯಲಕ್ಕೆ ವಸುಧೇಂದ್ರರ ನಾಲ್ಕು ಪುಸ್ತಕಗಳು

 

ಓದುಗ ವರ್ಗ ಬೆಳೆಯುತ್ತಿಲ್ಲ... ಪುಸ್ತಕ ಕೊಂಡು ಓದುವವರಿಲ್ಲ ಎಂಬ ಸುಳ್ಳುಗಳ ಮಧ್ಯೇ ಓದುವ ಆಸಕ್ತಿ ಇರುವವರಿಗೆ ಪುಸ್ತಕಗಳಿಲ್ಲ ಎಂಬ ಸತ್ಯವೊಂದು ಭಾನುವಾರ ನಯನ ಸಭಾಂಗಣದಲ್ಲಿ ಅನಾವರಣವಾಯಿತು.

 

ಅದು ವಸುಧೇಂದ್ರ ವಿರಚಿತ ಪುಸ್ತಕಗಳ ಬಿಡುಗಡೆ ಸಮಾರಂಭ. ಅದೃಶ್ಯ ಕಾವ್ಯ ಎಂಬ ಬ್ರೈಲ್ ಪುಸ್ತಕವನ್ನು ಅನಾವರಣ ಮಾಡಿದವರು ಮಧು ಸಿಂಘಾಲ್. ಹರ್‍ಯಾಣ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿದ ಮಧು ಸಿಂಘಾಲ್ ಅಂಧತ್ವವನ್ನು ಮೀರಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ನಡೆದ ಸಾಹಿತ್ಯ ಸಂಕಿರಣಗಳಲ್ಲಿ ಭಾಗವಹಿಸಿದವರು.

Vasudendra, Madhu Singhal, Girish Kasaravalli, Vikram visaji

 

ಕನ್ನಡ ಸಾಹಿತ್ಯ ಎಷ್ಟೆಲ್ಲ ಮುಂದುವರೆದಿದ್ದರೂ ಕನ್ನಡ ಸಾಹಿತ್ಯವನ್ನು ಬ್ರೈಲ್ ಓದುಗರಿಗೆ ತಲುಪಿಸಿಲ್ಲ. ಇತ್ತೀಚೆಗೆ ಮೈಸೂರಿನಲ್ಲಿ ಬ್ರೈಲ್ ಪ್ರೆಸ್ ಕಾರ್‍ಯಾರಂಭ ಮಾಡಿರುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಬ್ರೈಲ್ ಮೂಲಕ ಆಸಕ್ತ ಓದುಗರನ್ನು ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನ ನಡೆಸಿದ ವಸುಧೇಂದ್ರ ಪ್ರಯತ್ನ ಶ್ಲಾಘನೀಯ ಎಂದು ಮಧು ಸಿಂಘಾಲ್ ವಸುಧೇಂದ್ರರ ಹೊಸ ಪ್ರಯತ್ನವನ್ನು ಶ್ಲಾಘಿಸಿದರು.

 

ರಾಜ್ಯವು ಸುವರ್ಣ ಕರ್ನಾಟಕ ವರ್ಷಾಚರಣೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಸರಕಾರವು ಕನ್ನಡದ ಉತ್ತಮ ಪುಸ್ತಕಗಳನ್ನು ಬ್ರೈಲ್‌ನಲ್ಲಿ ಪ್ರಕಟಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದವರು ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ. ವಸುಧೇಂದ್ರ ಅವರ ಚೇಳು, ಅಮ್ಮ ಅಂದ್ರೆ ನಂಗಿಷ್ಟ ಮತ್ತು ಮನೀಷೆ ಪುಸ್ತಕಗಳನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು. ವಸುಧೇಂದ್ರರ ಕಥೆಗಳನ್ನು ಉಲ್ಲೇಖಿಸಿ, ಕಥೆಗಾರ ಅಮೂರ್ತಗಳನ್ನು ಮೂರ್ತ ರೂಪದಲ್ಲಿ ಸಾಕಾರಗೊಳಿಸಲು ಪ್ರಯತ್ನಿಸಿದರೆ ಸಿನೆಮಾ ನಿರ್ದೇಶಕ ಮೂರ್ತ ರೂಪಗಳನ್ನು ಮೀರುವುದಕ್ಕೆ ಪ್ರಯತ್ನಿಸುತ್ತಾನೆ ಎಂದರು.

 

ಕಾರ್‍ಯಕ್ರಮಕ್ಕೆ ಬರಬೇಕಿದ್ದ ಡಾ. ಓ. ಎಲ್. ಎನ್. ನಾಗಭೂಷಣ ಸ್ವಾಮಿ ತಮ್ಮ ಅಭಿಪ್ರಾಯವನ್ನು ಈ-ಮೇಯ್ಲ್ ಮೂಲಕ ಕಳುಹಿಸಿದ್ದರು. ವಸುಧೇಂದ್ರ ಬರೆಯುವ ಶೈಲಿಯನ್ನು ಅದರಲ್ಲಿಯೂ ಅಪರೂಪದ ಗುಣಾತ್ಮಕ ಹಾಸ್ಯ ಪ್ರಜ್ಞೆಯ ಬಗ್ಗೆ ಡಾ. ಓಎಲ್‌ಎನ್ ಮೆಚ್ಚುಗೆ ವ್ಯಕ್ತಪಡಿಸಿ, ಬಿ.ಜಿ. ಎಲ್ ಸ್ವಾಮಿ, ಗೊರೂರು ರಾಮಸ್ವಾಮಿಯವರ ಹಾಸ್ಯಪ್ರಜ್ಞೆಯನ್ನು ಜ್ಞಾಪಿಸುತ್ತವೆ ಎಂದು ವಸುಧೇಂದ್ರರ ಬರಹಗಳನ್ನು ಪ್ರೋತ್ಸಾಹಿಸಿದರು.

 

ಅನಾವರಣಗೊಂಡ ಪುಸ್ತಕಗಳ ಪ್ರಥಮ ಪ್ರತಿಯನ್ನು ಲ್ಯಾಪ್‌ಟಾಪ್‌ನಲ್ಲಿ ಕನ್ನಡ ಬರವಣಿಗೆಯನ್ನು ಸಾಧ್ಯಗೊಳಿಸಲು ಕಾರಣರಾದ ಬರಹ.ಕಾಂನ ಶೇಷಾದ್ರಿ ವಾಸು ಅವರಿಗೆ ಅರ್ಪಿಸಲಾಯಿತು. ಶೇಷಾದ್ರಿ ವಾಸು ಪರವಾಗಿ ಪುಸ್ತಕದ ಪ್ರತಿಗಳನ್ನು ಸತ್ಯಪ್ರಕಾಶ್ ಕಾಗಿನೆಲೆ ಸ್ವೀಕರಿಸಿದರು.

 

ವಸುಧೇಂದ್ರರನ್ನು ಅಭಿನಂದಿಸಿ : vas123u@rocketmail.com

ವಸುಧೇಂದ್ರ ಕಥೆ: ಬಾಗಿಲಿಂದಾಚೆ, ಪೋಗದಿರೆಲೋ ರಂಗ

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com