Monday February 19th 2018

ಮೈಸೂರು ಮಹಾರಾಣಿಯ ದರ್ಬಾರು!

shobhaಮೈಸೂರು ದಸರಾ ಎಂದರೆ ಕನ್ನಡಿಗರ ಕಣ್ಣಲ್ಲಿ ಮೈಸೂರು ಮಹಾರಾಜರ ವೈಭವ, ದರ್ಬಾರು, ಆನೆ ಮೇಲೆ ಅಂಬಾರಿ, ಮೆರವಣಿಗೆ… ಇದು ಅ? ಬೇಗ ಮಾಸಿಹೋಗುವಂಥದ್ದಲ್ಲ. ಆದರೆ, ಇವತ್ತು ಆ ಮಹಾರಾಜರ ಸ್ಥಾನದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ. ಇವತ್ತಿನ ದಸರಾದಲ್ಲಿ ಅಕ್ಷರಶಃ ಮೈಸೂರಿನ ಮಹಾರಾಣಿಯಂತೆ ಮೆರೆಯುತ್ತಿದ್ದಾರೆ.

ಒಂದು ರೀತಿಯಲ್ಲಿ ಅವತ್ತಿನ ಮಹಾರಾಜರೆ ಇವತ್ತಿನ ಮಂತ್ರಿಗಳು!

ಕಳೆದ ವರ್ಷದ ದಸರಾ ಶೋಭಾ ಅವರ ಪಾಲಿಗೆ ಹೊಸದು, ಗೊಂದಲಗಳಿಂದ ಕೂಡಿದ ರಿಹರ್ಸಲ್. ಆದರೆ ಈ ವ? ಹಾಗಲ್ಲ, ಎಲ್ಲವೂ ಪೂರ್ವನಿರ್ಧಾರಿತ. ಹಣದ ಹರಿವು, ಆಡಳಿತಯಂತ್ರದ ಬಳಕೆ, ಸ್ಥಳೀಯರ ಪಾಲುದಾರಿಕೆ… ಎಲ್ಲವೂ ಅಚ್ಚುಕಟ್ಟು. ಇವರ ಈ ಪ್ಲಾನ್ಡ್ ಪ್ರೋಗ್ರಾಮ್ ಮುಂದೆ ಮೈಸೂರಿನ ಪಾರ್ಟ್ ಟೈಂ ಪೊಲಿಟಿಷಿಯನ್‌ಗಳೆಲ್ಲ ಸುಸ್ತೋ ಸುಸ್ತು.

ದಸರಾ ಎಂದರೆ ಜನರ ಹಬ್ಬ, ನಾಡಹಬ್ಬ, ಎಲ್ಲರ ಭಾಗವಹಿಸುವಿಕೆಯಿಂದಲೇ ಅದಕ್ಕೊಂದು ಮೆರುಗು. ಆದರೆ ಶೋಭಾರ ದರ್ಬಾರು ಹೇಗಿದೆ ಎಂದರೆ, ಆಹ್ವಾನ ಪತ್ರಿಕೆಯಲ್ಲಿ ಪ್ರೊಟಕಾಲ್ ಪ್ರಕಾರ ಸ್ಥಳೀಯ ಗಣ್ಯರ ಹೆಸರಿದೆ, ಆದರೆ ಅವರೇ ಇಲ್ಲ. ಬರಲು ಇಷ್ಟವಿಲ್ಲವೋ ಅಥವಾ ಸರಿಯಾಗಿ ಕರೆದಿಲ್ಲವೋ, ಮುಕ್ಕಾಲುಪಾಲು ಉದ್ಘಾಟನಾ ಸಮಾರಂಭಗಳೆಲ್ಲ ಶೋಭಾಯಮಾನ!

ಕರ್ನಾಟಕಕ್ಕೆ ಯಡಿಯೂರಪ್ಪ; ಮೈಸೂರಿಗೆ ಶೋಭಾ ಕರಂದ್ಲಾಜೆ!

ಸಾಂಸ್ಕೃತಿಕ ನಗರ ಮೈಸೂರನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಉಂಬಳಿಯಾಗಿ ಕೊಟ್ಟಿರುವಂತಿದೆ. ಯಾರು ಕೇಳಲಿ ಬಿಡಲಿ, ಬೊಕ್ಕಸದಲ್ಲಿ ಹಣವಿಲ್ಲದಿರಲಿ, ದಸರಾಕ್ಕೆ ನೀರಿನಂತೆ ಕೋಟಿಗಟ್ಟಲೆ ಹರಿದಿದೆ. ಕೇಂದ್ರ ಸರ್ಕಾರ ಕೂಡ ಕೇಳಿದಷ್ಟು ಕೊಟ್ಟಿದೆ. ಜೊತೆಗೆ ನರ್ಮ್ ಯೋಜನೆಯ ಹಣವೂ ಶೋಭಾರ ಕೈಯಲ್ಲಿಯೇ ಇದೆ. ಅಪರಿಮಿತ ಹಣ, ಯಡಿಯೂರಪ್ಪನವರ ಕೃಪಾಕಟಾಕ್ಷ, ಯಾರೂ ಎದುರು ಮಾತನಾಡದ ಸ್ಥಿತಿ- ಶೋಭಾರನ್ನು ಮೈಸೂರಿನ ಮಹಾರಾಣಿಯನ್ನಾಗಿಸಿದ್ದರೆ ಆಶ್ಚರ್ಯವಿಲ್ಲ.

ಆಶ್ಚರ್ಯ ಅಂದರೆ, ಶೋಭಾರಲ್ಲಿ ಹಣ-ಅಧಿಕಾರಕ್ಕಾಗಿ ಹಪಹಪಿಸುವ ಹಂಬಲವಿದೆ. ಆದರೆ ವೃತ್ತಿನಿರತ ರಾಜಕಾರಣಿಗಳಷ್ಟಲ್ಲ. ಎಲ್ಲರನ್ನೂ ಸೈಡಿಗೆ ಸರಿಸಿ ಮಿಂಚಬೇಕೆಂಬ ಆಸೆಯಿದೆ. ಆದರೆ, ಕೆಲಸ ಮಾಡದೆ, ಹೆಸರು ಕೆಡಿಸಿಕೊಂಡಲ್ಲ.

ಒಟ್ಟಿನಲ್ಲಿ ಸಿಕ್ಕಾಪಟ್ಟೆ ಚುರುಕಾಗಿದ್ದಾರೆ. ಸಿಕ್ಕಾಪಟ್ಟೆ ಚುರುಕೇ ಸಿಕ್ಕಾಪಟ್ಟೆ ಭ್ರಷ್ಟಾಚಾರ ಎನ್ನುವುದು ಕಾಮನ್ ಸೆನ್ಸ್!

ಬಸವರಾಜು

  • Share/Bookmark